ತಾಲ್ಲೂಕಿನ ಕಂಬದದೇವರಹಟ್ಟಿ ಗ್ರಾಮದಲ್ಲಿ ಶನಿವಾರ 1.45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕೆರೆಯನ್ನು ಉದ್ಘಾಟಿಸಿ, ಬಳಿಕ ನೂತನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ ಗ್ರಾಮದ ಸಿಸಿ ರಸ್ತೆಯನ್ನು ಗುಣಮಟ್ಟದಿಂದ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಮುಖಂಡರಾದ ಬಸವರಾಜ್ ಯಾದವ್, ದಾಸಯ್ಯ, ರಾಜಣ್ಣ, ಮಾರುತೇಶ್, ಕಮಲಾಕ್ಷ, ಸಾರಿಕಾ, ಹರೀಶ್, ಸೇರಿದಂತೆ ಅಧಿಕಾರಿಗಳು ಇದ್ದರು. #Holalkere Bharatiya Janata Party (BJP) | BJP Karnataka |