ಕೊಡಗು ಜಿಲ್ಲೆಯ ಏಕೈಕ ಮಹಿಳಾ ಸಹಕಾರ ಬ್ಯಾಂಕ್ ಲಾಭದಲ್ಲಿ ಮುನ್ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 9.45 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಅರವಿಂದ್ ಅಣ್ಣಪ್ಪ ತಿಳಿಸಿದ್ರು. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಮ್ಮ ಬೋಪಯ್ಯ ಮತ್ತು ಪ್ರೇಮ ಸೋಮಯ್ಯ ಅವರ ಪರಿಶ್ರಮದಿಂದಾಗಿ 1997ರಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆಗೊಂಡು ಆರ್‌ಬಿಐ ಲೈಸನ್ಸ್ ಪಡೆದಿದೆ. ಬ್ಯಾಂಕಿನಲ್ಲಿ ಒಟ್ಟು 2,376 ಮಂದಿ ಸದಸ್ಯರಿದ್ದು, 44.06 ಲಕ್ಷ ಪಾಲು ಬಂಡವಾಳ ಹೊಂದಿದೆ. ಬ್ಯಾಂಕಿನ ನಿಧಿಗಳು ರೂ.32.31 ಲಕ್ಷ, ಒಟ್ಟು ಠೇವಣಾತಿ ರೂ.10.07 ಕೋಟಿ ಇದೆ. 9.45 ಲಕ್ಷ ನಿವ್ವಳ ಲಾಭ ಗಳಿಸಿದೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿAದ ನೀಡಲಾಗುವ ಅತ್ಯುತ್ತಮ ಪಟ್ಟಣ ಬ್ಯಾಂಕ್ ಪ್ರಶಸ್ತಿಯನ್ನು ಮಹಿಳಾ