ನಗರದ ಮದೀನಾ ಮಸೀದಿಯಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಭಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮೂಲಕ ಆಚರಣೆ ಮಾಡಿದರು. ಈ ವೇಳೆ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಟಿ.ರಘುಮೂರ್ತಿಯವರು ಮದೀನಾ ಮಸೀದಿಯಲ್ಲಿ ನಡೆದ ಈದ್ ಮಿಲಾದ್ ಹಬ್ಬದಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ನಗರಸಭೆ ಅಧ್ಯಕ್ಷೆ ಶಿಲ್ಪಾ, ಗ್ಯಾರೆಂಟಿ ಯೋಜನೆಗಳ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದುಗೆ ತಿಪ್ಪೇಸ್ವಾಮಿ, ಮುಸ್ಲಿಂ ಮುಖಂಡರಾದ ಹೆಚ್.ಎಸ್. ಸೈಯದ್, ಅನ್ವರ್ ಮಾಸ್ಟರ್ ಸೇರಿದಂತೆ ಮುಂತಾದವರು ಇದ್ದರು.