ಧರ್ಮಸ್ಥಳದ ಜೊತೆ ಭಾವನಾತ್ಮಕ ಸಂಬಂಧ ಇದೆ, ಅದಕ್ಕೆ ಪ್ರಶ್ನೆ ಬಂದಾಗ ಕ್ಲಾರಿಟಿ ಕೊಡೋದು ಸರ್ಕಾರದ ಕರ್ತವ್ಯ ಅದನ್ನ ಸಿದ್ದರಾಮಯ್ಯ ಸರ್ಕಾರ ಮಾಡಿದೆ ಎಂದು ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು. ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಭಾನುವಾರ ಸಂಜೆ 5 ಗಂಟೆಗ ಮಾತನಾಡಿದ ಅವರು ಅಲ್ಲಿ ತಪ್ಪಾಗಿದೆಯೋ ಇಲ್ವೋ ಎಂದು ನೋಡೋಕೆ ತನಿಖೆ ಮಾಡೋದು ಮುಖ್ಯ, ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಸೆನ್ಸಿಟಿವ್ ಆಗಿರುತ್ತೆ, ಹುಷಾರಾಗಿ ಸರ್ಕಾರ ತೀರ್ಮಾನ ಮಾಡಬೇಕು. ನಮ್ಮ ಸರ್ಕಾರ ಮಾಡಿದೆ., ಇದರ ಮೇಲೆ ನಾನು ಚರ್ಚೆ ಮಾಡಲ್ಲ. ತನಿಖೆ ಮುಗಿಯಲಿ ಎಂದರು.