ಆಯುಧ ಪೂಜೆ ಅಂಗವಾಗಿ ಹೊಸನಗರ ಪೊಲೀಸ್ ಠಾಣೆಯಲ್ಲೂ ಅದ್ದೂರಿಯಾಗಿ ಆಯುಧ ಪೂಜೆಯನ್ನ ಬುಧವಾರ ಸಂಜೆ 5 ಗಂಟೆಗೆ ನೆರವೇರಿಸಲಾಯ್ತು. ನಾಡದೇವಿ ಶ್ರೀ ಚಾಮುಂಡೇಶ್ವರಿ ಭಾವಚಿತ್ರಕ್ಕೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಪಿಸ್ತೂಲ್, ಬಂದೂಕು ಹಾಗೂ ಹತ್ತಾರು ಬೈಕ್, ಜೀಪ್, ಕಾರುಗಳಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ನಡೆಯಿತು. ಪಿಎಸ್ಐ ಶಂಕರ್ ಗೌಡ ಪಾಟೀಲ್, ನಿವೃತ್ತ ಎಎಸ್ಐ ರತ್ನಾಕರ್ ಗೌಡ, ಸಿಬ್ಬಂದಿಗಳಾದ ವೆಂಕಟೇಶ್, ಮಾಯಣ್ಣ, ಗೋಪಾಲಕೃಷ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.