Download Now Banner

This browser does not support the video element.

ಸಾಗರ: ಸಿಗಂದೂರು ಸೇತುವೆ ಮೇಲೆ ಬೈಕ್‌ ಸ್ಟಂಟ್‌, ಸಾಗರ ಗ್ರಾಮಾಂತರ ಪೊಲೀಸರ ಬಿತ್ತು ದಂಡ

Sagar, Shimoga | Aug 21, 2025
ಸಾಗರ ತಾಲೂಕಿನ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ ಸಾಗರ ಗ್ರಾಮಾಂತರ ಪೊಲೀಸರು ದಂಡ ವಿಧಿಸಿದ್ದಾರೆ. ಅಲ್ಲದೆ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದಿದ್ದು ಈ ಬಗ್ಗೆ ಪೊಲೀಸರು ಗುರುವಾರ ಸಂಜೆ 6 ಗಂಟೆಗೆ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 15ರಂದು ಯುವಕನೊಬ್ಬ ಸಿಗಂದೂರು ಸೇತುವೆ ಮೇಲೆ ವೀಲಿಂಗ್ ಮಾಡಿದ್ದ. ಈತ ಬೈಕ್‌ ಸ್ಟಂಟ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬೈಕ್‌ ಸವಾರನನ್ನು ಪತ್ತೆ ಹಚ್ಚಿ, ಆತನಿಗೆ ದಂಡ ವಿಧಿಸಿದ್ದಾರೆ.ದುಬಾರಿ ಬೆಲೆ ಕವಾಸಕಿ ಬೈಕ್‌ ಸವಾರನಿಗೆ 5000 ದಂಡ ವಿಧಿಸಿದ್ದಾರೆ. ಅಲ್ಲದೆ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ.
Read More News
T & CPrivacy PolicyContact Us