ಹಾವೇರಿ ತಾಲೂಕು ಕುರಗುಂದ ಗ್ರಾಮದಲ್ಲಿ ತುಙಗಾಮೇಲ್ದಂಡೆ ಕಾಲುವೆ ಮೇಲಿನ ರಸ್ತೆಯಲ್ಲಿ ಚಲಿಸುತ್ತಿದ್ದ ಚಕ್ಕಡಿ ಪಲ್ಟಿಯಾಗಿ ಎರಡು ಎತ್ತುಗಳು ಸಾವನ್ನಪ್ಪಿವೆ. ಭರಮಪ್ಪ ಕೆಂಚಣ್ಣನವರಿಗೆ ಸೇರಿದ ಎರಡು ಎತ್ತುಗಳು ಸ್ಥಳದಲ್ಲಿ ಸಾವನ್ನಪ್ಪಿವೆ. ಮೃತ ಎತ್ತುಗಳನ್ನು ಒಂದೆ ಸಮಾದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅಪಘಾತಕ್ಕೆ ಕಾಲುವೆಯ ಅವೈಜ್ಞಾನಿಕ ನಿರ್ಮಾಣ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರೈತ ಭರಮಪ್ಪಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ