ಹುಬ್ಬಳ್ಳಿ: ಮನೆಯಲ್ಲಿ ಮಲಗಿದ್ದ ಯುವಕನನ್ನು ಆಚೆಗೆ ಕರೆದು ರಾಡ್ ಹಾಗೂ ತಲ್ವಾರ್ ನಿಂದ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಸೆಟ್ಲಿಮೆಂಟ್ ನಲ್ಲಿ ನಡೆದಿದೆ. ಮಹೇಶ್ ಬಾರ್ಕೆರ್ ಎಂಬಾತನೆ ಹಲ್ಲೆಗೆ ಒಳಗಾದ ಯುವಕನಾಗಿದ್ದಾನೆ. ದುಷ್ಕರ್ಮಿಗಳು ಹಲ್ಲೆ ಮಾಡುತ್ತಿದ್ದಂತೆ ಅವರಿಂದ ತಪ್ಪಿಸಿಕೊಂಡು ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಗಾಯಗೊಂಡ ಯುವಕನನ್ನು ಪೊಲೀಸರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.