ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ಬೆಂಚೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಚಿರತೆಯ ಅಟ್ಟಹಾಸ ಮುಂದುವರಿದಿದೆ. ಶುಕ್ರವಾರ ರಾತ್ರಿ 11 ಗಂಟೆಯಲ್ಲಿ ಚಿರತೆಯು ಕುರಿಗಳ ಮೇಲೆ ದಾಳಿ ಮಾಡಿ ನಾಲ್ಕೈದು ಕುರಿಗಳನ್ನು ಗಾಯಗೊಳಿಸಿದೆ. ಪ್ರತಿದಿನ ಗ್ರಾಮಸ್ಥರ ಕಣ್ಣಿಗೆ ಬೀಳುತ್ತಿರುವ ಚಿರತೆಯಿಂದಾಗಿ ಕುರಿಗಾಹಿಗಳಲ್ಲಿ ಗಾಬರಿ ವಾತಾವರಣ ಉಂಟಾಗಿದೆ. ಅರಣ್ಯ ಇಲಾಖೆ ಬೋನು ಇಟ್ಟಿದ್ದರೂ ಚಿರತೆ ಹಿಡಿಯಲಾಗದ ಹಿನ್ನೆಲೆಯಲ್ಲಿ ತಕ್ಷಣ ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ....