ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಅಂಗವಾಗಿ ಆಗಷ್ಟ್ ೨೪ ಭಾನುವಾರದಂದು ಇಳಕಲ್ ನಗರದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಆಗಲಿದೆ ಎಂದು ಸಹಾಯಕ ಅಭಿಯಂತರ ರವಿ ಮಾದರ ತಿಳಿಸಿದ್ದಾರೆ. ನಗರದ ಹೆಸ್ಕಾಂ ಕಚೇರಿಯ ೧೧೦ ಸ್ಥಾವರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ನಡೆಯುವದರಿಂದ ಮುಂಜಾನೆ ೧೦ ಗಂಟೆಯಿAದ ಸಂಜೆ ೫-೩೦ ರವರೆಗೆ ವಿದ್ಯುತ್ ವ್ಯತ್ಯಯ ಸೋಲಾರ್ ಎನರ್ಜಿ ಕೇಂದ್ರ, ಕಂದಗಲ್ಲ, ಗುಡೂರ, ಬಂಡರಗಲ್ಲ, ಬೂದಿಹಾಳ ಎಸ್ ಕೆ, ಗುಗಲಮರಿ, ತುಂಬ, ಹನಮನಾಳ ಮತ್ತು ಬಲಕುಂದಿ ಗ್ರಾಮಗಳಲ್ಲಿ ಇರುವುದಿಲ್ಲ ಸಾರ್ವಜನಿಕರು ಇಲಾಖೆಯ ಜೊತೆಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆ ಮೂಲಕ ಅಗಸ್ಟ ೨೩ ರಂದು ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.