ಸೌಜನ್ಯಪರ ಹೋರಾಟಗಾರ ಅಂತಲೇ ಗುರುತಿಸಿಕೊಂಡಿರುವ ಗಿರೀಶ್ ಮಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ದಾಖಲು ಮಾಡಲಾಗಿದೆ. ಆಗಸ್ಟ್ 29ರ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸಾಮಾಜಿಕ ಕಾರ್ಯಕರ್ತೆ ಕಾವೇರಿ ಎನ್ನುವವರು ದೂರು ದಾಖಲಿಸಿದ್ದಾರೆ. ಧರ್ಮಸ್ಥಳ ಸಾಮೂಹಿಕ ಮದುವೆ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ಕೊಟ್ಟಿರುವುದರಿಂದ ಹೆಣ್ಣು ಮಕ್ಕಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಅಲ್ಲಿ ಮದುವೆ ಆದವರು ಕೇವಲ ಬಡವರಲ್ಲ ಹರಕೆ ಹೊತ್ತು ಕೂಡ ಮದುವೆ ಆದವರು ಇದ್ದಾರೆ. ಹೆಣ್ಣು ಮಕ್ಕಳ ಮೇಲೆ ಕೀಳಾಗಿ ಹೇಳಿಕೆ ಕೊಟ್ಟ ಗಿರೀಶ್ ಮಟ್ಟಣ್ಣವರ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ