ಮದ್ದೂರು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತುಮಕೂರಿನಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಯಲ್ಲಿ ಪ್ರತಿಕ್ರಿಯೆ ನೀಡಿದರು. ಈಗಾಗಲೇ 15 ಮಂದಿಯನ್ನು ಬಂಧಿಸಿದ್ದು, ಇನ್ನೂ ನಾಲ್ಕೈದು ಜನರ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದರು. ಗಲಾಟೆಯಲ್ಲಿ ಹೊರಗಿನಿಂದ ಬಂದವರ ಕೈವಾಡವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಸೀದಿ ಅಕ್ರಮ ಕಟ್ಟಡ ದೂರು, ಹಾಗೂ ಪ್ರಚೋದನೆ ಕುರಿತು ತನಿಖೆ ನಡೆಯಲಿದೆ. "ನಮಗೆ ಮುಖ್ಯವಾದುದು ಶಾಂತಿ-ನೆಮ್ಮದಿ ಕಾಪಾಡುವುದು," ಎಂದು ಸಚಿವರು ತಿಳಿಸಿದರು