ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿನ ಕೆಇಬಿ ಎದುರಿನ ರೈತ ಅಗ್ರೋ ಕ್ಲಿನಿಕ್ ಮುಂದೆ ನೂರಾರು ರೈತರು ಸಾಲಿನಲ್ಲಿ ನಿಂತು ಗೊಬ್ಬರಕ್ಕಾಗಿ ಪಟ್ಟು ಹಿಡಿದ ಪರಿಣಾಮ, ಸ್ಥಳದಲ್ಲಿ ಭಾರಿ ಜನಸಮೂಹ ಹೆಚ್ಚಾಗಿ ಸಂಚಾರಕ್ಕೂ ಅಡ್ಡಿಯಾಯಿತು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು. ಅಂಗಡಿಯವರು ಸೋಮವಾರ ವಿತರಣೆ ಮಾಡುವುದಾಗಿ ಹೇಳಿದರೂ, ರೈತರ ಒತ್ತಾಯಕ್ಕೆ ಮಣಿದ ಕೊನೆಗೂ ಗೊಬ್ಬರ ವಿತರಣೆ ಪ್ರಾರಂಭವಾಯಿತು. ಗೊಬ್ಬರದ ಕೊರತೆಯಿಂದ ರೈತರಲ್ಲಿ ಆತಂಕ ವ್ಯಕ್ತವಾಗಿದೆ.