ನಗರದ ಮಹಾದೇವಿ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ವಿಶೇಷವಾಗಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ನಗರದ ಮಹಾದೇವಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂತೆ ಗಣೇಶನ ಪೆಂಡಲ್ ನಿರ್ಮಿಸಿ, ಅದರಲ್ಲಿ ಕನ್ನಡ ವರ್ಣಮಾಲೆ ಅಕ್ಷರಗಳು,ಇಂಗ್ಲೀಷ್ ಸೇರಿದಂತೆ ತಿಂಗಳು, ವಾರಗಳು ಹೆಸರುಗಳು ಬರೆಸಿ, ಶಿಕ್ಷಣದ ಬಗ್ಗೆ ಜಾಗೃತಿ ಸಂದೇಶಗಳು ಬರೆಸಿರುವುದು ಒಂದು ಕಡೆಯಾದರೆ, ರಾಷ್ಟ್ರ ನಾಯಕರು, ಕವಿಗಳ ಭಾವಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಇದರ ಮಧ್ಯದದಲ್ಲಿ ವಿಶೇಷವಾದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.