ಶಿರಸಿ: ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಕಳೆದ 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಅಗಸೇಬಾಗಿಲಿನ ಹಾಲಿ ನವದೆಹಲಿಯ ಚಾಣಕ್ಯ ಪುರಿ ಸತ್ಯ ನಿಕೇತನದಲ್ಲಿ ವಾಸವಾಗಿದ್ದ ದೀಪಕ್ ವಿಠಲ ಭಂಡಾರಿ (61) ಬಂಧಿತ. ಈತ 1990ರ ನ. 29ರಂದು ಶಿರಸಿಯ ಐದು ರಸ್ತೆ ಬಳಿ ದಿನಕರ ನಾರಾಯಣ ಶೆಟ್ಟಿ ಎಂಬಾತನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.