ದೀವರು ಹಿಂದುಳಿದ ವರ್ಗಗಳ ಆಯೋಗ ನಡೆಸುವ ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ದೀವರು ಎಂದು ಮುಖ್ಯ ಜಾತಿಯನ್ನಾಗಿ ನಮೂದಿಸಬೇಕು ಎಂದು ದೀವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್. ನಾಗರಾಜ್ ಹೇಳಿದರು. ಬುಧವಾರ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಲತಃ ದೀವರು ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಆದರೆ ಬಹುತೇಕ ದೀವರು ಇತಿಹಾಸದ ಅರಿವಿನ ಕೊರತೆಯಿಂದ ಅಥವಾ ಕೀಳರಿಮೆಯಿಂದ ತಮ್ಮ ಜಾತಿಯನ್ನು ಈಡಿಗ ಎಂದು ನಮೂದಿಸಿಕೊಳ್ಳುತ್ತಿದ್ದಾರೆ. ಇದರಿಂದ ದೀವರು ಎಂಬ ಒಂದು ಪರಂಪರೆ ಕಣ್ಮರೆಯಾಗುವ ಸ್ಥಿತಿಗೆ ಬಂದಿದೆ. ಬಹುತೇಕ ದೀವರು ಸಾಂದರ್ಭಿಕವಾಗಿ ಈಡಿಗ ಎಂದು ಮುಖ್ಯ ಜಾತಿಯನ್ನಾಗಿ ಗುರುತಿಸಿಕೊಂಡಿದ್ದಾರೆ ಎಂದರು