ಹಾಸನ: ಭಾರತ ದೇಶದ LIC ಹಣ ಅಂಬಾನಿ ಹಾಗೂ ಆಧಾನಿ ಅವರ ಕಂಪೆನಿಗಳ ಪಾಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಆರೋಪಿಸಿದರು.ಹಾಸನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಸುಮಾರು 50 ರಿಂದ 60 ಸಾವಿರ ಕೋಟಿ ಹಣವನ್ನು ಎಲ್.ಐ.ಸಿ.ಮೂಲಕ ಹೂಡಿಕೆ ಮಾಡುತ್ತಿದ್ದಾರೆ, ಆದರೆ ಈ ಹಣ ಎಲ್ಲವೂ ಬಡವರ ಬದಲಾಗಿ ಉಳ್ಳವರ ಪಾಲಾಗುತ್ತಿದೆ ಎಂದು ಹೇಳಿದರು.ಕಾರ್ಮಿಕ ಇಲಾಖೆಯಿಂದ ರಾಜ್ಯಾದ್ಯಂತ ಸಣ್ಣ ಸಣ್ಣ ಸಮಾಜಗಳನ್ನು ಗುರುತಿಸಿ ಅವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಕೆಲಸ ಮಾಡಲಾಗುತ್ತಿದೆ ಇದರಿಂದ ಹಲವರಿಗೆ ಅನುಕೂಲವಾಗಲಿದೆ, ಇದು ಮೊದಲ ಹಂತದ ಪ್ರಗತ್ನವಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದರು.