Download Now Banner

This browser does not support the video element.

ಶಿವಮೊಗ್ಗ: ಬಿಜೆಪಿಯವರು ಧರ್ಮಾಧಾರಿತ ರಾಜಕೀಯ ಬಿಡಬೇಕು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೀಶ್

Shivamogga, Shimoga | Sep 2, 2025
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಭಾನುಮುಷ್ತಾಕ್ ಅವರ ಹೆಸರನ್ನು ಮುಖ್ಯಮಂತ್ರಿಗಳು ಸೂಚಿಸಿದ ಮೇಲೆ ಬಿಜೆಪಿಯವರು ಎಂದಿನಂತೆ ತಮ್ಮ ಧರ್ಮಾಧಾರಿತ ಬೇಳೆಯನ್ನು ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಆರೋಪಿಸಿದ್ದಾರೆ. ಮಂಗಳವಾರ ಸಂಜೆ 5 ಗಂಟೆಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರಾ ರಾಜ್ಯದ ನಾಡಹಬ್ಬವಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ದಸರಾ ಸಂಬಂಧಿಸಿದಂತೆ ೨೪ ಸಮಿತಿಗಳಿದ್ದು, ಉದ್ಘಾಟನೆಯ ಪರಮಾಧಿಕಾರವನ್ನು ಪ್ರತಿವರ್ಷದಂತೆ ಮುಖ್ಯಮಂತ್ರಿಗಳ ವಿವೇಚನೆಗೆ ಸಮಿತಿ ಬಿಟ್ಟಿತ್ತು ಎಂದರು.
Read More News
T & CPrivacy PolicyContact Us