ಕಲಬುರಗಿಯ ತಾಜನಗರದ ನಿವಾಸಿ ಸೈಯ್ಯದ ಜಿಲಾನಿ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.. ಅಬ್ದುಲ್ ಜಬ್ಬಾರ ಹಾಗೂ ಅಮೀರ ಮೆಹೆಬೂಬ್ ಸೇರಿ ರೈಲ್ವೆ ಇಲಾಖೆಯಲ್ಲಿ ಟೆಂಡರ್ ಹೂಡಿಕೆ ಮಾಡಿ ಲಾಭ ಕೊಡಿಸುತ್ತೇವೆಂದು ನಂಬಿಸಿದ್ದಾರೆ. ನನ್ನಿಂದ ₹37 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಕಲಬುರಗಿಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಅಮೀರ ಮೆಹೆಬೂಬ್ ಖಾತೆಗೆ ವರ್ಗಾವಣೆ ಮಾಡಿರುವ ಸಾಕ್ಷಿಗಳನ್ನು ಪೊಲೀಸರಿಗೆ ಒದಗೊಸಿದ್ದಾರೆ. ಸದ್ಯ ದೂರು ಆಧರಿಸಿ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 420, 406 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆದಿದೆ ಎಂದು ಗುರುವಾರ 8 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.