ಹಿರಿಯೂರು ಉಪವಿಭಾಗ ವ್ಯಾಪ್ತಿಯ ಭರಂಗಿರಿ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಫ್-10 ಐಮಂಗಲ ವಾಟರ್ ಸಪ್ಲೆ 11 ಕೆವಿ ಮಾರ್ಗದ ಎಕ್ಸ್‍ಪ್ರೆಸ್ ಫೀಡರ್ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಭರಂಗಿರಿ 66/11 ವಿದ್ಯುತ್ ವಿತರಣಾ ಕೇಂದ್ರದ 11 ಕೆ.ವಿ. ಮಾರ್ಗಗಳಿಗೆ ಸೆ.10, 13, 16ರಂದು ಬೆ.10 ರಿಂದ ಸ. 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಕುರುಬರಹಳ್ಳಿ, ಅಮ್ಮನಹಟ್ಟಿ, ವಿ.ವಿ.ಪುರ, ತಳವಾರಹಟ್ಟಿ, ಬೆಳಗಟ್ಟ, ಕೂನಿಕೆರೆ ಕಾವಲ್, ಎರಕೆನಾಗೇನಹಳ್ಳಿ, ಮೇಕೇನಹಳ್ಳಿ, ಕಕ್ಕಯ್ಯನಹಟ್ಟಿ, ಅಗಳೇರಹಟ್ಟಿ, ಕುಂಟಪ್ಪನಹಟ್ಟಿಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸ.ಕಾ. ಇಂಜಿನಿಯರ್ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.