ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ, ತಮ್ಮ ಬಹುಕಾಲದ ಗೆಳೆಯ ರೋಷನ್ ಅವರನ್ನು ವರಿಸಿದ್ದಾರೆ. ಗುರುವಾರ, ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಚಂದನವನದ ಬಹುತೇಕ ಸ್ಟಾರ್ ನಟರು ಅನುಶ್ರೀ ಅವರ ಮದುವೆಗೆ ಆಗಮಿಸಿ ಶುಭ ಹಾರೈಸಿದರು. ಮದುವೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅನುಶ್ರೀ ಪತಿ ರೋಷನ್, ಅನುಶ್ರೀ ತುಂಬ ಸಿಂಪಲ್ ಎಂದರು. ಬಳಿಕ ಉತ್ತರಿಸಿದ ಅನುಶ್ರೀ, ನಾವಿಬ್ಬರು ಇಷ್ಟು ದಿನ ಪ್ರೇಮಿಗಳಾಗಿದ್ವಿ, ಇನ್ಮೇಲೆ ಗಂಡ ಹೆಂಡತಿ. ಚಿಕ್ಕ ಚಿಕ್ಕ ಸಂತೋಷಗಳನ್ನು ಅಷ್ಟೇ ಎಂಜಾಯ್ ಮಾಡ್ತಿವಿ. ರೋಷನ್ ಸಹ ತುಂಬ ಕೈಂಡ್ ಪರ್ಸನ್. ಸಹಾಯ ಮಾಡುವ ಮನೋಭಾವನೆ ಇದೆ. ಅಪ್ಪು ಪುನೀತ್ ರಾಜ್ ಕುಮಾರ್ ಅವರ ಇರುವಿಕೆಯಲ್ಲಿಯೇ ನಮ್ಮ ಮದುವೆ ನಡೆದಿದೆ ಎಂದಿದ್ದಾರೆ.