ಕ್ರೂಜರ್-ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿರುವ ಘಟನೆ ರಟಕಲ್ ಠಾಣಾ ವ್ಯಾಪ್ತಿಯ ಚೇಂಗಟಾ ಸಮೀಪದ ಅಡಕಿಮೋಕ ತಾಂಡಾ ಬಳಿ ನಡೆದಿದೆ. ಅಡಕಿಮೋಕ ತಾಂಡಾದ ವಿಶಾಲ ಅಲಿಯಾಸ್ ಡಿಜೆ ವಿಶಾಲ (22) ಮೃತ ಯುವಕನಾಗಿದ್ದು, ಅನಿತಾಬಾಯಿ ಹಾಗೂ ಪಾರ್ವತಿಬಾಯಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕ್ರೂಜರ್ ದಿಂದ ಡಿಕ್ಕಿ ಮಾಡಿ ಕೊಲೆಗೈಯಲಾಗಿದೆ ಎಂದು ಮೃತನ ಪಾಲಕರು ರಟಕಲ್ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ. ಎರಡು ವರ್ಷದ ಹಿಂದೆ ಮೃತ ವಿಶಾಲನ ಭಾವನ ಟಂಟಂವೊಂದು ಪಲ್ಟಿಯಾಗಿತ್ತು. ಅದರಲ್ಲಿ ಕ್ರೂಸರ್ ಚಾಲಕ ಸೀತಾರಾಮನ ತಾಯಿ ಶಾಂತಾಬಾಯಿ ಮೃತಪಟ್ಟಿದ್ದಳು. ಅಂದಿನಿಂದ ವಿಶಾ