ಯಲ್ಲಾಪುರ : ತಾಲ್ಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ಕೊಂಡೆಮನೆ ಸ ಕಿ ಪ್ರಾ ಶಾಲೆಯ ಶಿಕ್ಷಕಿ ಮಮತಾಜ್ ನದಾಫ್,ತಾರೆಹಳ್ಳಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ರಾಮದಾಸ ಪೈ, ಶಿರನಾಲ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸತೀಶ ಶೆಟ್ಟಿ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಪ್ರೌಢ ವಿಭಾಗದಲ್ಲಿ ಯಲ್ಲಾಪುರ ಸ.ಪ್ರೌಢ ಶಾಲೆಯ ಶ್ಯಾಮಲಾಬಾಯಿ ಹಾಗೂ ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿಯ ಸದಾನಂದ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ. ಸ.೫ ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.