ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮುನ್ನ ಭಾರತ ದೇಶಕ್ಕೆ ಮುಸಲ್ಮಾನರು ನೀಡಿದ ಕೊಡುಗೆ ಒಮ್ಮೆ ಓದಿಕೊಳ್ಳಲಿ ಎಂದು ಸಾಮಾಜಿಕ ಕಾರ್ಯಕರ್ತ ಮಹ್ಮದ್ ಹನೀಫ್ ಹೇಳಿದ್ದಾರೆ. ಗುರುವಾರ 5 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟಕ್ಕೂ, ರಾಷ್ಟ್ರದ ರಕ್ಷಣೆಯಲ್ಲಿಯೂ ಮುಸ್ಲಿಮರ ಅಪಾರ ಕೊಡುಗೆ ಇದೆ. ಗೇಟ್ ಆಫ್ ಇಂಡಿಯಾದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ 95,300 ಜನ ವೀರರ ಹೆಸರು ಉಲ್ಲೇಖವಿದೆ. ಇದರಲ್ಲಿ 61,396 ಜನರು ಮುಸ್ಲಿಂ ಸಮುದಾಯದವರಾಗಿದ್ದಾರೆ. ಲಿಂಗಾಯತ ಸಮುದಾಯದವರು ಕೇವಲ 598 ಮಂದಿ ಮಾತ್ರ. ಹೀಗಿರುವಾಗ ಮುಸ್ಲಿಂ ಸಮಾಜದ ತ್ಯಾಗ ಮತ್ತು ಸೇವೆಯನ್ನು ನಿರ್ಲಕ್ಷಿಸಿ, ಸಮಾಜವನ್ನು ವಿಭಜಿಸುವ ಹೇಳಿ