ಯಶೋಧರ ನಿರ್ದೇಶನದ ಹಚ್ಚೆ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಸಿನಿಮಾದ ೧೦ ಗಂಟೆಯ ಮೊದಲ ಶೋ ಶುಕ್ರವಾರ ಬೆಂಗಳೂರಿನ ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತು. ಇದೇ ಶೋಗೆ ಈ ಸಿನಿಮಾದ ನಾಯಕ ಅಭಿಮನ್ಯು ಆಗಮಿಸಿದ್ದರು. ಅವರ ಆಗಮನವಾಗ್ತಿದ್ದಂತೆ, ನೆರೆದಿದ್ದ ಸಿನಿಮಾ ಪ್ರೇಕ್ಷಕರು ಅವರನ್ನು ಮುತ್ತಿಕ್ಕಿದರು. ಚಿತ್ರದ ನಾಯಕನನ್ನು ಕಂಡು ಎಲ್ಲರೂ ಅವರ ಜತೆ ಫೋಟೋ ಕ್ಲಿಕ್ಕಿಸಿಕೊಂಡರು. ಕೈ ಕುಲುಕಿ ಶುಭ ಹಾರೈಸಿದರು. ಬಳಿಕ ಆ ಜನ ಸಂದಣಿಯಿಂದ ಹೊರಬರಲು ನಾಯಕ ನಟ ಅಭಿಮನ್ಯು ಕೊಂಚ ಕಷ್ಟಪಟ್ಟರು. ಜನರ ಖುಷಿ ಕಂಡು ಅಭಿಮನ್ಯು ಸಹ ಸಂತಸಗೊಂಡರು.