ಹುಬ್ಬಳ್ಳಿ: ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವದೊಂದಿಗೆ ಸಂಸದರ ಕ್ರೀಡಾ ಮಹೋತ್ಸವವನ್ನು ಜನವರಿ ತಿಂಗಳಿನಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ನಗರದಲ್ಲಿಂದು ಸಂಸದರ ಕ್ರೀಡಾ ಮಹೋತ್ಸವ ಪೋಸ್ಟರ್, ಟೀಸರ್ ಹಾಗೂ ಜೆರ್ಸಿ ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಕ್ರೀಡಾಕೂಡಾ ಆಯೋಜನೆ ಮಾಡುತ್ತಾ ಬಂದಿದ್ದು, ಸೆ. ೨೦ ರೊಳಗಾಗಿ ಕ್ರೀಡಾಪಟುಗಳು ನೋಂದಣಿ ಮಾಡಿಕೊಳ್ಳಬೇಕು. ಕ್ರೀಡಾಪಟುಗಳಿಗಾಗಿ ಕಬ್ಬಡ್ಡಿ, ಹಗ್ಗ ಜಗ್ಗಾಟ, ಕ್ರಿಕೆಟ್, ವಾಲಿಬಾಲ್, ಕುಸ್ತಿ, ಲಗೋರಿ, ಗಿಲ್ಲಿದಾಂಡು, ಯೋಗ, ಮಲ್ಲಗಂಬ, ಅಥ್ಲೆಟಿಕ್ಸ್ ಹೀಗೆ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.