52ರ ಅಂಕಲ್ 26 ವರ್ಷದ ವಿಧವೆ ಮಹಿಳೆಯ ಲಿವ್ ಇನ್ ಸಂಬಂಧದಲ್ಲಿ ಉಂಟಾದ ಬಿರುಕು ಹತ್ಯೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 30ರಂದು ಮಧ್ಯಾಹ್ನ 12ರ ಸುಮಾರಿಗೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಠ್ಠಲ್ ಎಂಬಾತನಿಂದ ವನಜಾಕ್ಷಿ ಹತ್ಯೆಯಾಗಿದೆ.ಕ್ಯಾಬ್ ಚಾಲಕನಾಗಿದ್ದ ವಿಠ್ಠಲನ ಓರ್ವ ಪತ್ನಿ ಮೃತಪಟ್ಟಿದ್ದರೆ, ಮತ್ತೊಬ್ಬಳು ದೂರಾಗಿದ್ದಳು.ತನ್ನದೇ ಗ್ರಾಮದ ವಿಧವೆ ವನಜಾಕ್ಷಿಯೊಂದಿಗೆ 3 ವರ್ಷಗಳಿಂದ ವಿಠಲ್ ಸಂಬಂಧ ಹೊಂದಿದ್ದ. ಶನಿವಾರ ವನಜಾಕ್ಷಿ ತನ್ನ ಮತ್ತೊಬ್ಬ ಸ್ನೇಹಿತನ ಜೊತೆ ಕಾರಿನಲ್ಲಿ ತೆರಳುವಾಗ ಹಿಂಬಾಲಿಸಿದ್ದ ವಿಠ್ಠಲ್, ಅಡ್ಡಗಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.