ಹಠಾತ್ ಪತಿಯ ಸಾವು ಕಂಡ ಪತ್ನಿಗೆ ಆಘಾತವಾಗಿ ಎರಡು ದಿನಗಳ ನಂತರ ಮೃತಳಾದ ಘಟನೆ ಬುಧವಾರ ಸಂಜೆ ಪಟ್ಟಣದಲ್ಲಿ ನಡೆದಿದೆ. ಕಂಪ್ಲಿ ತಾಲೂಕು ರಜಪೂತ ಸಮಾಜದ ನಿಕಟಪೂರ್ವ ಅಧ್ಯಕ್ಷ ಜಿ. ಶಂಕರಸಿಂಗ್ (68) ತಿರುಪತಿಯಲ್ಲಿ ಹೃದಯಾಘಾತ ದಿಂದ ಭಾನುವಾರ ನಿಧನರಾಗಿದ್ದರು. ಇದರಿಂದ ಆಘಾತಕ್ಕೆ ಒಳಗಾಗಿ ನಿರಾಹಾರಳಾಗಿದ್ದ ಪತ್ನಿ ಜಿ.ಶಕುಂತಲಾಬಾಯಿ (56) ಆರೋಗ್ಯದಲ್ಲಿ ಏರುಪೇರು ಉಂಟಾಗಿ ಬುಧವಾರ ಸಂಜೆ ನಿಧನರಾದರು. ಮೃತರಿಗೆ ಮೂವರು ಪುತ್ರರಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಪಟ್ಟಣದಲ್ಲಿ ನಡೆಯಲಿದೆ.