ಆಳಂದ ತಾಲೂಕಿನ ರಿಪಬ್ಲಿಕನ್ ಯೂಥ್ ಫೆಡರೇಶನ್ ವತಿಯಿಂದ ಆಳಂದ ಪಟ್ಟಣಸಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ನಿಮಿತ್ಯವಾಗಿ ಭೀಮ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸೋಮವಾರ 2ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ್, ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ,ಮರೆಪ್ಪ ಬಡಗೇರ, ಬಾಬುರಾವ್ ಅರುಣೋದಯ, ರಿಪಬ್ಲಿಕನ್ ಯೂಥ್ ಫೆಡರೇಷನ್ ತಾಲೂಕ ಅಧ್ಯಕ್ಷ ಪ್ರವೀಣ್ ಮೊದಲೇ,ಯುವ ಘಟಕ ಅಧ್ಯಕ್ಷ ಮಿಲಿಂದ ಮೋಘಾ ಏಕ ಮುಖಂಡರು ಪಾಲ್ಗೊಂಡಿದ್ದರು.