ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ, ನಗದು ಮೊಬೈಲ್ ಅಪಹರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಶನಿವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದು ಪಬ್ಲಿಕ್ ಆ್ಯಪ್ ಭಾನುವಾರ ಬೆಳಿಗ್ಗೆ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದ ಕೆಳಗಿನ ತುಂಗಾನಗರ 2 ನೇ ಕ್ರಾಸ್ ನಿವಾಸಿ, ಗಾರೆ ಕೆಲಸ ಮಾಡುವ ಮೊಹಮ್ಮದ್ ತಬಾರಕ್ ಉಲ್ಲಾ ಯಾನೆ ತಪ್ಪಣ್ಣ (24) ಹಾಗೂ ಟಿಪ್ಪುನಗರ 5 ನೇ ಕ್ರಾಸ್ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಜಾಫರ್ ಸಾದಿಕ್ ಯಾನೆ ಟಿನ್ನರ್ ಯಾನೆ ನಜೀರ್ (24) ಬಂಧಿತರು. ಬಂಧಿತರಿಂದ ಕೋಟು, ಗೌನ್, 10 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.