ತಾಲ್ಲೂಕಿನ ಎಸ್.ಗೊಲ್ಲರಹಟ್ಟಿ ಗ್ರಾಮದಲ್ಲಿನ ಕುಟುಂಬವೊಂದು ಮೂಡ ನಂಬಿಕೆಯಿಂದ ಬಾಣಂತಿ, ಮಗುವನ್ನು ಮನೆಯ ಹೊರಗಿನ ಶೇಡ್‍ನಲ್ಲಿ ಇರಿಸಲಾಗಿತ್ತು. ವೈದ್ಯಾಧಿಕಾರಿ, ಪಿಡಿಒ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಬಾಣಂತಿಯ ಕುಟುಂಬದವರಿಗೆ ಮನವರಿಕೆ ಮಾಡಿ ಬಾಣಂತಿ, ಮಗುವನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾದ ಘಟನೆ ಗುರುವಾರ ಸಂಜೆ6ಗಂಟೆಗೆ ನಡೆದಿದೆ.ಗ್ರಾಮದ ಬಾಣಂತಿ ರೇಣುಕಮ್ಮ ಅವರು ಚೋರುನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು, ತಾಯಿ, ಮಗು ಮನೆಗೆ ತೆರಳಿದಾಗ ಕುಟುಂಬಸ್ತರು ಮೂಢನಂಬಿಕೆಯಿಂದ ಮನೆಯ ಹೊರಗಿನ ಶೆಡ್‍ನಲ್ಲಿ ಇರಿಸಿದ್ದರು. ಘಟನೆಯ ವಿಷಯ ತಿಳಿದ ಅಧಿಕಾರಿಗಳು ಕುಟುಂಬದವರೊಂದಿಗೆ ಚರ್ಚಿಸಿ, ಮೂಢನಂಬಿಕೆಯ ಬಗ್ಗೆ ಜಾಗೃತಿ ಮೂಡಿಸಿ ತಾಯಿ, ಮಗುವಿನ ಸಂರಕ್ಷ