ಕಲಬುರಗಿಯಲ್ಲಿ ಮತ್ತೆ ಸೈಬರ್ ವಂಚನೆಯ ಬಲೆಗೆ ದಂಪತಿ ಸಿಲುಕಿದ್ದಾರೆ. ಇ.ಎಸ್ಐ ಡೆಂಟಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ದೀಪಲಕ್ಷ್ಮಿ ಅವರಿಗೆ ಅಪರಿಚಿತರಿಂದ ಕರೆ ಬಂದು, “ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ” ಮತ್ತು “ಮುಂಬೈ ಕ್ರೈಂ ಬ್ರಾಂಚ್” ಅಧಿಕಾರಿಗಳೆಂದು ಸುಳ್ಳು ಹೇಳಿ, ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ನಿಮ್ಮ ಹೆಸರು ಸೇರಿದೆ ಎಂದು ಬೆದರಿಕೆ ಹಾಕಿದ್ದಾರೆ. ನಂತರ ವಾಟ್ಸಪ್ ವೀಡಿಯೋ ಕಾಲ್ ಮೂಲಕ ಭಯ ಹುಟ್ಟಿಸಿ, ಒಂದು ದಿನ ಪೂರ್ತಿ ನಿಗಾದಲ್ಲಿ ಇಟ್ಟಂತೆ ನಾಟಕವಾಡಿ, ಕೊನೆಗೆ ₹99,999 ಹಣವನ್ನು ಗೂಗಲ್ ಪೇ ಮೂಲಕ ಪಡೆದು ವಂಚಿಸಿದ್ದಾರೆ ಎಂದು ಸಿ.ಇ.ಎನ್ ಪೊಲೀಸ್ ಠಾಣೆಗೆ ದೀಪಲಕ್ಷ್ಮಿ ಪ್ರಕರಣ ದಾಖಲಿಸಿದ್ದಾರೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಶುಕ್ರವಾರ 9 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.