ನಗರದ ಕೆ ಆರ್ ಮೊಹಲ್ಲಾ ತೊಗರಿ ಬೀದಿಯಲ್ಲಿ ಪಂಚಮುಖಿ ವಿನಾಯಕ ಯುವಕರ ಬಳಗದ ಯುವಕರು ಮುಸ್ಲಿಂ ಸ್ನೇಹಿತರ ಜೊತೆ ಸೇರಿ ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಿ ಸೌಹಾರ್ದತೆ ಸಂದೇಶ ನೀಡಿ, ಮಾದರಿಯಾದರು. ಪೂಜೆಯ ಬಳಿಕ ಪ್ರಸಾದ ಹಾಗೂ ನೈವೇದ್ಯವನ್ನು ಪರಸ್ಪರ ತಿನ್ನಿಸಿ ಖುಷಿಪಟ್ಟರು. ಪರಸ್ಪರ ಗಣೇಶ ಹಾಗೂ ಮೊಹರಂ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶವನ್ನು ಜನತೆಗೆ ರವಾನಿಸಿದರು.