ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದ್ವಿಭಾಷಾ ಪದ್ದತಿ ವಿಷಯವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ದ್ವಿಭಾಷಾ ಪದ್ದತಿ ಜಾರಿಗೆ ಸಂಬಂಧಿಸಿದ ಚರ್ಚೆಯನ್ನು ಸ್ವಾಗತಿಸಿದ ಅವರು, ಇದರ ಜಾರಿ ಸಂಬಂಧಿಸಿದ ನಿರ್ಧಾರವು ಸರ್ಕಾರ ಮತ್ತು ಇಲಾಖೆಗಳಿಗೆ ಬಿಟ್ಟದ್ದು ಎಂದು ಹೇಳಿದರು. ತಮಿಳುನಾಡು, ಕೇರಳದಲ್ಲಿ ಈ ವ್ಯವಸ್ಥೆಗೆ ವಿರೋಧವಿದ್ದರೂ, ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ದತಿ ಅಳವಡಿಕೆ ಬಗ್ಗೆ ,ಕಾಂಗ್ರೆಸ್ ಸರ್ಕಾರದ ಕಾಲದಲ್ಲೇ ಚಿಂತನೆ ನಡೆದಿತ್ತು ಎಂದು ಖರ್ಗೆ ಹೇಳಿದರು.