ರಾಹುಗ್ರಸ್ಥ ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಗ್ರಹಣದ ದೃಶ್ಯ ಗೋಚರವಾಗಿದೆ. ಬೆಳಗ್ಗೆಯಿಂದಲೂ ಸಂಪೂರ್ಣ ಮೋಡ ಕವಿದ ವಾತಾವರಣ ಹಾಗೂ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಚಂದ್ರ ಗ್ರಹಣ ದೃಶ್ಯ ಕಾಣುವುದು ಅಥವಾ ಇಲ್ಲವೋ ಎನ್ನುವ ಆತಂಕ ಎದುರಾಗಿತ್ತು. ಆದರೆ ಭಾನುವಾರ ರಾತ್ರಿ 9 ಗಂಟೆ ನಂತರ ಸಂಪೂರ್ಣ ಗ್ರಹಣದ ದೃಶ್ಯ ಗೋಚರಗೊಂಡಿದ್ದು ಜಿಲ್ಲೆಯಾದ್ಯಂತ ಖಗೋಳ ಹಾಗೂ ಗ್ರಹಣ ಆಸಕ್ತರು ಸಂತಸ ಗೊಂಡಿದ್ದಾರೆ... ಭಾನುವಾರ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ರಕ್ತ ಚಂದನದಂತೆ ಕೌತುಕ ಕಂಡುಬಂದಿದ್ದು ಚಂದ್ರ ಗ್ರಹಣವನ್ನ ಜಿಲ್ಲೆಯ ಚಿಕ್ಕಮಗಳೂರು, ಕಡೂರು ತರೀಕೆರೆ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ನಾಗರಿಕರು ಕಣ್ತುಂಬಿ ಕೊಂಡರು.... ಅದರಲ್ಲೂ ರಾತ್ರಿ ಸುಮಾರು 11: 30ರ ಸಮ