ಕೆ ಆರ್ ಮಾರ್ಕೆಟ್ ನ ಹೂವಿನ ಮಾರ್ಕೆಟ್ ಜಿಕೆವಿಕೆ ಆವರಣಕ್ಕೆ ಶಿಫ್ಟ್ ಆಗ್ತಾ ಇರೋ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ವ್ಯಾಪಕ ವಿರೋಧ ವ್ಯಕ್ತ ಆಗ್ತಾ ಇದೆ. ಪರಿಸರ ಪ್ರೇಮಿಗಳು ಕೂಡ ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. 900 ಮರಗಳನ್ನು ಕಡಿದು ಹೂವಿನ ಮಾರ್ಕೆಟ್ ಜಿಕೆವಿಕೆಗೆ ಶಿಫ್ಟ್ ಮಾಡುವ ಅಗತ್ಯ ಇಲ್ಲ. ಇದರಿಂದ ಪರಿಸರಕ್ಕೆ ಸಾಕಷ್ಟು ಸಮಸ್ಯೆ ಉಂಟಾಗುತ್ತೆ ಅರ್ಥ ಮಾಡಿಕೊಳ್ಳಿ ಅಂತ ಪರಿಸರ ಪ್ರೇಮಿ ಮಂಜು ವಿಡಿಯೋ ಮೂಲಕ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ