ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಪಕ್ಕದಲ್ಲಿದ್ದ ಕಾಂಡಿಮೆಂಟ್ಸ್‌ಗೆ ಡಿಕ್ಕಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 11ರಂದು ಬೆಳಿಗ್ಗೆ 4.40ರ ಸುಮಾರಿಗೆ ಮಲ್ಲೇಶ್ವರಂನ ಲಿಂಕ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ.ಲಾರಿಯ ನಿಯಂತ್ರಣ ಕಳೆದುಕೊಂಡ ಚಾಲಕ ಫುಟ್‌ಪಾತ್ ಮೇಲೆ ಹತ್ತಿಸಿ, ನಂತರ ಕಾಂಡಿಮೆಂಟ್ಸ್‌ಗೆ ಲಾರಿ ಡಿಕ್ಕಿಯಾಗಿಸಿದ್ದಾನೆ.ಘಟನೆಯ ಬಳಿಕ ಲಾರಿ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಬೆಳಗ್ಗಿನ ಜಾವದ ಸಮಯವಾದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಲಾರಿ ತೆರವುಗೊಳಿಸಿದ್ದಾರೆ.