ನಗರದಲ್ಲಿ ಹದಗೆಟ್ಟು ಹಾಳಾಗಿರುವ ರಸ್ತೆಗಳನ್ನು ದುರಸ್ತಿಪಡಿಸುವಂತೆ ಹಾಗೂ ರಸ್ತೆಗಳಲ್ಲಿ ಬಾಯ್ತೆರೆದು ನಿಂತಿರುವ ತೆಗ್ಗು-ಕುಣಿ-ಗುಂಡಿಗಳನ್ನು ಮುಚ್ಚುವಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಈಗಾಗಲೇ ಈ ಬಗ್ಗೆ ನಗರಪಾಲಿಕೆಯ ಆಯುಕ್ತರು ಮತ್ತು ಮೇಯರ್ ಅವರಿಗೆ ಮನವಿ ಪತ್ರಗಳನ್ನು ನೀಡಿದ್ದರೂ, ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ. ಗುಂಡಿಗಳು ತುಂಬಿದ ರಸ್ತೆಯಲ್ಲಿ ವಾಹನಗಳ ಸವಾರರು ಮತ್ತು ಪಾದಾಚಾರಿಗಳು ಸಂಚರಿಸುವಾಗ ಕೆಲವೊಂದು ಬಾರಿ ಕೆಳಗೆ ಬಿದ್ದು, ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ತೆಗ್ಗು-ಗುಂಡಿಗಳಲ್ಲಿ ನೀರು ನಿಂತು ರಸ್ತೆಗಳೇ ಕಾಣುವುದಿಲ್ಲ. ಮೀನಾಕ್ಷಿ ಸರ್ಕಲ್ ಬಳಿ ಒಂದೊಂದು ಗುಂಡಿ ಒಂದರಿಂದ -ಒಂದೂವರೆ ಅಡಿಗಳಷ್ಟು ಆಳವಾಗಿವೆ. ಈ ರಸ್ತೆಯಲ್ಲಿ ವಾಹನಗಳ ಮತ್ತು