ಚಿಕಿತ್ಸೆ ಪಡೆಯಲು ಬಂದು ವೈದ್ಯರ ಚೇರ್ ಮೇಲೆ ಕುಳಿತು ರೋಗಿಯೊಬ್ಬ ದರ್ಪ ಮೆರೆದಿರುವ ಘಟನೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಬುಧವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ನಡೆದಿದೆ. ಇದೆ ವೇಳೆ ರೋಗಿಯನ್ನ ಎಬ್ಬಿಸಿ ಬೇರೆ ಕಡೆ ಕೂರಿಸಲು ಹೋದ ಅಟೆಂಡರ್ ಪ್ರಯತ್ನಿಸಿದ್ದಾರೆ. ಇದೇ ವೇಳೆ ಇನ್ನೊಬ್ಬ ವ್ಯಕ್ತಿ ಏಕೆ ಅಲ್ಲಿಂದ ಎಬ್ಬಿಸಿದೆ ಎಂದು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ರೋಗಿಗೆ ಸಂಬಂಧವೇ ಇಲ್ಲದ ವ್ಯಕ್ತಿಯಿಂದ ಹಲ್ಲೆ ನಡೆದಿದ್ದು, ವೈದ್ಯರ ಚೇರ್ ಮೇಲೆ ಕೂರಬೇಡಿ ಅಂತ ಬೆಡ್ ಮೇಲೆ ಮಲಗಿಸಲು ಕರೆ ತರುತ್ತಿದ್ದ ಸಿಬ್ಬಂದಿಯ ಮೇಲೆ ಈ ರೀತಿಯ ಕೃತ್ಯ ನಡೆದಿದೆ. ಇದೆ ವೇಳೆ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಸ