ಕುಮಟಾ: ಬೈಲಗದ್ದೆ, ಸಾಂತುರ ನಿವಾಸಿ ಮಹಾಲಕ್ಷ್ಮಿ ವೆಂಕಟರಮಣ ಗೌಡ (68) ಅವರು ಕಾಣೆಯಾಗಿದ್ದು, ಇವರ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿ ಕುಮಟಾ ಪೊಲೀಸರು ಮನವಿ ಮಾಡಿದ್ದಾರೆ.ಸೆ 18 ರಂದು ಬೆಳಿಗ್ಗೆ ಕತಗಾಲದಿಂದ ಗೋಕರ್ಣದಲ್ಲಿರುವ ತಮ್ಮ ತವರು ಮನೆಗೆ ಹೋಗುವುದಾಗಿ ಹೇಳಿ ಹೋದ ಮಹಾಲಕ್ಷ್ಮಿ ಅವರು, ಅಲ್ಲಿಗೆ ತಲುಪಿಲ್ಲ ಮತ್ತು ಈವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.ಸುಳಿವು ಸಿಕ್ಕಲ್ಲಿ ಕುಮಟಾ ಪೊಲೀಸ್ ಠಾಣೆ 08386-222333 ಈ ನಂಬರ್ ಗೆ ಸಂಪರ್ಕಿಸುವಂತೆ ಕೋರಿದ್ದಾರೆ.