ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳ ಬೆಂಗಳೂರಿನ ಮಹಜರು ಪ್ರಕ್ರಿಯೆ ಬಹತೇಕ ಅಂತ್ಯವಾಗಿದೆ. ಶನಿವಾರ ಬೆಳಿಗ್ಗೆಯೇ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನ ಬೆಂಗಳೂರಿಗೆ ಕರೆತಂದಿದ್ದ ಎಸ್ಐಟಿ ಅಧಿಕಾರಿಗಳು, ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಫ್ಲಾಟ್ ಒಂದರಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದರು. ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ತಂಗಿದ್ದರು ಎನ್ನಲಾದ ಪ್ಲಾಟ್‌ನಲ್ಲಿ ಆಗಸ್ಟ್ 31ರಂದೂ ಸಹ ಶೋಧ ಕಾರ್ಯ ನಡೆಸಿದ್ದರು. ಶೋಧ ಅಂತ್ಯವಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 12:30ಕ್ಕೆ ವಾಪಾಸ್ ಮಂಗಳೂರಿನತ್ತ ತೆರಳಿದ್ದಾರೆ.