ಈದ್ ಮಿಲಾದ್ ಹಬ್ಬವನ್ನು ನಗರದಲ್ಲಿ ಶುಕ್ರವಾರ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದ ಮುಸ್ಲಿಂ ಬಾಂಧವರು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಇಸ್ಲಾಂ ಧರ್ಮದ ಪುಣ್ಯ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾದಲ್ಲಿನ ಮಂದಿರಗಳ ಮಾದರಿಗಳನ್ನು ತಯಾರಿಸಿ, ನಗರದ ವಿವಿಧೆಡೆ ಭಾರಿ ಮೆರವಣಿಗೆ ನಡೆಸಿ, ಸಾಮೂಹಿಕವಾಗಿ ಭಕ್ತಿಗೀತೆ ಪ್ರಸ್ತುತಪಡಿಸಿದರು. ಮೆರವಣಿಗೆಯುದ್ದಕ್ಕೂ ಧರ್ಮ ಗುರುಗಳಿಂದ ಧಾರ್ಮಿಕ ಪಠಣ, ಭಕ್ತಿಗೀತೆಗಳ ಗಾಯನ ಗಮನ ಸೆಳೆಯಿತು.