ವೀರಶೈವ ಲಿಂಗಾಯತ ಮಠಗಳು ನಡೆಸಿದ ಅನ್ನ- ಅಕ್ಷರ ದಾಸೋಹದಿಂದಾಗಿಯೇ ರಾಜ್ಯದಲ್ಲಿ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಶನಿವಾರ ಸಂಜೆ ಬಸವ ಭವನದಲ್ಲಿ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ಮತ್ತು ನಂತರ ಸರ್ಕಾರಿ ಶಾಲೆಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದ ಆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಮಠಗಳು ನಡೆಸಿದ ಶಿಕ್ಷಣ ಸಂಸ್ಥೆಗಳಿಂದಾಗಿಯೇ ಇಂದು ಲಕ್ಷಾಂತರ ಜನ ಬದುಕು ಕಟ್ಟಿಕೊಂಡಿದ್ದಾರೆ ಎಂದರು.ಕೇವಲ ಅಕ್ಷರ ದಾಸೋಹ ಮಾತ್ರವಲ್ಲದೇ ಅನ್ನ ದಾಸೋಹ ನಡೆಸುವ ಮೂಲಕ ಸಮಾಜದ ಜನರ ಹಸಿವು ನೀಗಿಸುವ ಕೆಲಸವನ್ನು ಮಠಗಳು ಮಾಡಿದವು ಎ