ಅಂಗವಿಕಲ ಸರ್ಟಿಫಿಕೇಟ್ ನೀಡಲು 1500 ಹಣ ಪಡೆಯುತ್ತಿದ್ದ ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ನೀಲಕಂಠಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಸಂಜೆ 5 ಗಂಟೆಗೆ ದಾಳಿ ನಡೆಸಿದ, ಲೋಕಾಯುಕ್ತ ಅಧಿಕಾರಿಗಳು ಕ್ಲರ್ಕ್ ನೀಲಕಂಠಗೌಡನನ್ನು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕು ಆಚಾಪುರದ ಅಂದಾಸುರ ಗ್ರಾಮದ ನಾಗರಾಜ್ ಅವರ ಪುತ್ರಿಗೆ ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಅಂಗವಿಕಲ ಸರ್ಟಿಫಿಕೇಟ್‌ನ ಅಗತ್ಯವಿತ್ತು. ಈ ಹಿನ್ನೆಲೆ ಮಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದರು. ಬಳಿಕ ಫಾರಂಗಳು, ಭಾವಚಿತ್ರ ಮತ್ತು ದಾಖಲೆಗಳನ್ನು ಕ್ಲರ್ಕ್ ನೀಲಕಂಠಗೌಡನಿಗೆ ಒದಗಿಸಿದ್ದರು