ಅಗಸ್ಟ ೨೪ ಮಧ್ಯಹ್ನ ೨ ಗಂಟೆಯ ಸಂದರ್ಭ ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಸಿದ್ದಕೊಳದಲ್ಲಿ ಹರಿಯತ್ತಿರುವ ಜಲಪಾತ ನೋಡುಗರ ಗಮನವನ್ನು ಸಳೆಯುತ್ತಿವೆ. ಗುಡ್ಡದ ಕಲ್ಲಿನ ಮೇಲಿಂದ ಧಮ್ಮುಕುತ್ತ ಬೀಳುತ್ತಿರುವ ಜರಿ ಜರಿ ನೀರಿನ ಜಲಪತಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಿದ್ದನಕೊಳ್ಳದ ದೇವಸ್ಥಾನಕ್ಕೆ ಬಂದ ಭಕ್ತರು ಜಲಪಾತದಲ್ಲಿ ಸ್ನಾನ ಮಾಡಿ ಸಂತಸವನ್ನು ಪಡುತ್ತಿದ್ದಾರೆ. ಇನ್ನೂ ಯುವಕರು, ಮತ್ತು ಕುಟುಂಬಸ್ಥರು ಈ ಜಲಪಾತಕ್ಕೆ ಆಗಮಿಸಿ ಇಲ್ಲಿ ನೀರಿನ ತುಂಟಾಟ ಮಾಡಿ ದಾಸೋಹ ಪ್ರಸಾದ ಅಥವಾ ತಮ್ಮ ಮನೆಗಳಿಂದ ತಂದ ವಿವಿಧ ಬಗೆಯ ಊಟವನ್ನು ಸವಿದು ಆನಂದಿಸುತ್ತಿದ್ದಾರೆ.