ತಾಲ್ಲೂಕಿನ ರಾಯನಹಳ್ಳಿ ಗ್ರಾಮದ ಸುಬಾನ್ ಸಾಬ್ (65) ಕಾಣೆಯಾಗಿರುವ ಕುರಿತು ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಸುಬಾನ್ ಸಾಬ್ ಸುಮಾರು 05 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದಾರೆ. ಕನ್ನಡ, ಹಿಂದಿ, ಉರ್ದು ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ. ಕಾಣೆಯಾದ ವೇಳೆ ಬಿಳಿ ಬಣ್ಣದ ಅಂಗಿ ಹಾಗೂ ಪಂಚೆ, ಕಪ್ಪು ಬಣ್ಣದ ಟವಲ್ ಧರಿಸಿರುತ್ತಾರೆ.ಸುಬಾನ್ ಸಾಬ್ ಗುರುತು ಪತ್ತೆಯಾದವರು ತುರುವನೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 9480803149 ಮಾಹಿತಿ ನೀಡುವಂತೆ ಮಂಗಳವಾರ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.