ಆ್ಯಪ್ ಗೆ ಹಣ ಹಾಕಿದರ ನಿತ್ಯ ಹೆಚ್ಚಿನ ಬಡ್ಡಿ ಸಿಗಲಿದೆ ಎಂಬ ಆಮಿಷವೊಡ್ಡಿ 1.81 ಲಕ್ಷ ರೂ. ದೋಖಾ ಮಾಡಿದ ಕುರಿತು ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಬಡೆಮಕಾನ್ ನ ನೂರ್ ಜಾನ್ ಸೇರಿದಂತೆ ಕುಟುಂಬದ 11 ಮಂದಿಗೆ ದೋಖಾ ಮಾಡಿದ್ದು, ಇಲ್ಲಿನ ನಿವಾಸಿಗಳಾದ ರೊಮಾನಾ,ಮೆಹಬೂಬ್,ಅಜ್ಮಲ್ ಹಾಗೂ ಇಮ್ರಾನ್ ವಿರುದ್ದ ವಂಚನೆಗೆ ಒಳಗಾದವರು. HUGE ಎಂಬ ಆ್ಯಪ್ ಗೆ 16,500/- ರೂ ಹಾಕಿದರೆ ಪ್ರತಿದಿನ 650/- ರೂ ಬಡ್ಡಿ ಸಿಗಲಿದೆ ಎಂದು ನಾಲ್ವರು ಆರೋಪಿಗಳು ನೂರ್ ಜಾನ್ ಗೆ ನಂಬಿಸಿದ್ದಾರೆ. ಮೊದಲು ನೂರ್ ಜಾನ್ ಹಾಗೂ ಇವರ ಪತಿ ಹಣ ಹೂಡಿದ್ದಾರೆ.