ನಗರದ ರಿ.ಸ.ನಂ.260 ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಾರೆನ್ನುವ ಆರೋಪದ ಸ್ಥಳಕ್ಕೆ ಗುರುವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ವಿಜ್ಞಾನಿ ನಾಗೇಂದ್ರಪ್ಪ ಮಾತನಾಡಿ ದಾಖಲಾತಿಗಳು ಪರಿಶೀಲನೆ ಮಾಡುವ ತನಕ ಗಣಿಗಾರಿಕೆ ನಡೆಸುವಂತಿಲ್ಲವೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಸುವರ್ಣ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ರಾಜ್ಯ ಕಾರ್ಯದರ್ಶಿ ನವೀನ ಮಾತನಾಡಿ ಅರಣ್ಯ ಹಾಗು ಸರ್ಕಾರಿ ಜಾಗದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ನೀಡಬಾರದೆಂದು ಹೈಕೋರ್ಟ್ ಆದೇಶ ಮಾಡಿದೆ. ಆದರೆ ಇಲ್ಲಿ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಅನುಮತಿ ನೀಡಲಾಗಿದೆ. ಕೂಡಲೇ ರದ್ದು ಪಡಿಸಬೇಕು ಎಂದರು.