ಹೊನ್ನಾವರ: ನಗರದಲ್ಲಿ ರಸ್ತೆ ಬದಿ ಮಲಗಿದ್ದ ಹಸುವನ್ನು ಕಳ್ಳತನ ಮಾಡಲು ಯತ್ನಿಸಿದ್ದ ಇಬ್ಬರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.ಭಟ್ಕಳ ಮುಗ್ದುಂ ಕಾಲೋನಿಯ ಮೊಹಮ್ಮದ್ ಜಾಫರ್ ಸಾದಿಕ್ ಹಾಗೂ ಕುಂದಾಪುರ ತಾಲೂಕು ಗoಗೊಳ್ಳಿ ಯ ನಿವಾಸಿ ಸಬಿಲ್ ಬೆಟ್ಟೆ ಹುಸೇನ್ ಸಾಬ್ ಬಂದಿತರು. ದನ ಕದಿಯಲು ಯತ್ನಿಸಿದ್ದ ಕುರಿತು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ತನಿಖೆ ಕೈಗೊಂಡ ಹೊನ್ನಾವರ ಪೊಲೀಸ್ ಇಲಾಖೆ,ಕಳ್ಳರನ್ನು ಪತ್ತೆ ಹಚ್ಚಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ .