ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪೋಲೆನಹಳ್ಳಿಯಲ್ಲಿ ನೀರಿನ ವಿಚಾರಕ್ಕೆ ಸಂಬಂಧಿಸಿದ ಜಗಳ ರೋಚಕ ತಿರುವು ಪಡೆದು ಕೊಲೆಯಲ್ಲಿ ಅಂತ್ಯ ವಾಗಿದೆ. ಬುಧವಾರ ಸಂಜೆ 4 ಗಂಟೆ ಸುಮಾರಿಗೆ ನಡೆದ ಘಟನೆದಲ್ಲಿ, ಬೆಳಗ್ಗೆ ನೀರಿನ ವಿಚಾರಕ್ಕೆ ಆನಂದ್ ಹಾಗೂ ರಾಮಕೃಷ್ಣರ ನಡುವೆ ಗಲಾಟೆ ನಡೆದಿತ್ತು. ಈ ವಿಚಾರಕ್ಕೆ ಕೋಪಗೊಂಡ ರಾಮಕೃಷ್ಣನ ಪುತ್ರ ನಾಗೇಶ್, "ನನ್ನ ತಂದೆಯ ಜೊತೆ ಜಗಳ ಮಾಡ್ತೀಯಾ?" ಎಂದು ಆಕ್ರೋಶಗೊಂಡು, ಬುಲೆರೋ ವಾಹನವನ್ನು ವೇಗವಾಗಿ ಚಲಿಸಿ ಆನಂದ್ ಮೇಲೆ ಡಿಕ್ಕಿ ಹೊಡೆದಿದ್ದಾನೆ. ಭೀಕರ ಡಿಕ್ಕಿಯ ಪರಿಣಾಮ ಸ್ಥಳದಲ್ಲೇ ಆನಂದ್ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀ